ನಸುಕಿನ ನೇಸರನ ನಸು ಮಸುಕು
ಕಿರಣಗಳು ಬೆಳಕು ಚೆಲ್ಲುತ್ತಲಿರೆ
ಗಾಜಿನಿಂದ ತೂರಿ
ಅಪ್ಪನ ಕೈಯಲ್ಲೋ
ಅಮ್ಮನ ಹೆಗಲೇರಿಯೋ ಸ್ಲೀಪಿಂಗ್ ಬ್ಯಾಗನಲ್ಲಿ ಬರುವ ಪುಟ್ಟಕ್ಕನ ಸವಾರಿ
ಮುಂಜಾವಿನ ಮಂಜು ಹನಿ ಸೂರ್ಯನಿಂ ಹೊಳೆದಂತೆ
ಬ್ಯಾಗಿನಿಂದಿಣುಕುವ ಆ ಸ್ವಚ್ಛ ಮೊಗವು
ಸುಪ್ರಭಾತವ ಹೇಳೆ ಮೂಡುವ ಮಂದ ನಗೆ
ಮನದಿ ಮೂಡಿಸುವ ಹಬ್ಬದ ಭಾವವು
ಸವಾರಿ ಹೊರಬಂದಂತೆ ಜಿಮ್ಮಿನ ತಯ್ಯಾರಿ
ಪುಟ್ಟಕ್ಕನಿಗೀಗ ಹುರುಪು ಭಾರಿ
ಇಲ್ಲೀಗ ಇವಳದೇ ಕಾನೂನು, ನಿಯಮಗಳು
ಇವಳೇ ಎಲ್ಲದರ ರಾಯಭಾರಿ
ಮಾತು ಕೇಳದವರಲ್ಲಿ ಇವಳದು ಬಲು ಜೋರು
ಏನಿದ್ದರೂ ಇವಳೆಮ್ಮ ರಾಜಕುಮಾರಿ
ನಾಲ್ಕು ಗೇಣಿನ ಜಿಮ್ಮು ಮೂರು ಗೇಣಿನ ಪುಟ್ಟಕ್ಕ
ಇದರ ತುಂಬ ಅವಳ ಕಸರತ್ತುಗಳು
ಕಿರಣಗಳು ಬೆಳಕು ಚೆಲ್ಲುತ್ತಲಿರೆ
ಗಾಜಿನಿಂದ ತೂರಿ
ಅಪ್ಪನ ಕೈಯಲ್ಲೋ
ಅಮ್ಮನ ಹೆಗಲೇರಿಯೋ ಸ್ಲೀಪಿಂಗ್ ಬ್ಯಾಗನಲ್ಲಿ ಬರುವ ಪುಟ್ಟಕ್ಕನ ಸವಾರಿ
ಮುಂಜಾವಿನ ಮಂಜು ಹನಿ ಸೂರ್ಯನಿಂ ಹೊಳೆದಂತೆ
ಬ್ಯಾಗಿನಿಂದಿಣುಕುವ ಆ ಸ್ವಚ್ಛ ಮೊಗವು
ಸುಪ್ರಭಾತವ ಹೇಳೆ ಮೂಡುವ ಮಂದ ನಗೆ
ಮನದಿ ಮೂಡಿಸುವ ಹಬ್ಬದ ಭಾವವು
ಸವಾರಿ ಹೊರಬಂದಂತೆ ಜಿಮ್ಮಿನ ತಯ್ಯಾರಿ
ಪುಟ್ಟಕ್ಕನಿಗೀಗ ಹುರುಪು ಭಾರಿ
ಇಲ್ಲೀಗ ಇವಳದೇ ಕಾನೂನು, ನಿಯಮಗಳು
ಇವಳೇ ಎಲ್ಲದರ ರಾಯಭಾರಿ
ಮಾತು ಕೇಳದವರಲ್ಲಿ ಇವಳದು ಬಲು ಜೋರು
ಏನಿದ್ದರೂ ಇವಳೆಮ್ಮ ರಾಜಕುಮಾರಿ
ನಾಲ್ಕು ಗೇಣಿನ ಜಿಮ್ಮು ಮೂರು ಗೇಣಿನ ಪುಟ್ಟಕ್ಕ
ಇದರ ತುಂಬ ಅವಳ ಕಸರತ್ತುಗಳು
ಮೋತಿ ಕೋತಿ ಸಿಂಹ ಮಿಠು ಪಾತಕ್ಕ
ಇವಳ ಜಿಮ್ಮಿನಾ ಸಂಗಾತಿಗಳು
ಪೆಡಲಿಲ್ಲದೆ ಸ್ಯೆಕ್ಲಿಂಗು ನೀರಿಲ್ಲದೆ ಸ್ವಿಮ್ಮಿಂಗು
ಮಲಗಿಯೇ ರನ್ನಿಂಗು ಸಿಂಹಪುಟ್ಟಿಯೊಡನೆ ರೆಸ್ಲ್ಲಿಂ ಗೇ ರೆಸ್ಲಿಂಗು
ಇವಳ ವೇಗ ರಭಸಕ್ಕೆ ಇವಳೇ ಸರಿಸಾಟಿ
ಇದಕ್ಕಿಲ್ಲ ಎಲ್ಲಿಯೂ ರಿಕಾರ್ಡಬ್ರೇಕಿಂಗು
ಈ ಪುಟ್ಟ ಕೈಗಳಲ್ಲಿ ಆವ ಬಲವೋ ನಾ ಕಾಣೆ
ಕೋತಿಯ ಬಾಲವೋ ನಜ್ಜಿಗೊಜ್ಜಿ
ಪಾತಕ್ಕನ ಪಕ್ಕ ಅಪ್ಪಚ್ಚಿಯಾದರೆ
ಮಿಟ್ಟುವಿನ ಚುಂಚೆಲ್ಲ ಬಜ್ಜಿಬಜ್ಜಿ
ಈ ಪುಟ್ಟ ಬಾಯಿಯ ಪಟ್ಟಂತೂ ಬೆರಗಿನದು
ಸಿಂಹಪುಟ್ಟಿಯ ಮುಖವ ಕಚ್ಚಿಕಚ್ಚಿ
ಮೇಲಿದ್ದ ಸಿಂಹಕ್ಕೆ ತಪ್ಪಿತ್ತು ಜೊಲ್ಲಿನಾಯುಧವದು
ಮೋತಿ ಮಾತ್ರ ಬೀಳುತಿತ್ತು ಬೆಚ್ಚಿಬೆಚ್ಚಿ
ಈ ಕೈಯ ಎಳೆತಕ್ಕೆ ಆ ಕಾಲ ಒದೆತಕ್ಕೆ
ಜಿಮ್ಮೆಲ್ಲ ಒಮ್ಮೊಮ್ಮೆ ನಡುಗಿ ನಡುಗಿ
ಭಲೇ ಭಲೇ ಎಂಬ ಕೈಯ ತಟ್ಟುವಿಕೆಗೆ
ರಪರಪನೆ ಬಡಿಯುವಳು ಹಿಗ್ಗಿ ಹಿಗ್ಗಿ
ಎಷ್ಟವಳ ಹೋರಾಟ ಎಷ್ಟೊಂದು ಗುದ್ದಾಟ
ಝಾನ್ಸಿರಾಣೀಗೇನು ಕಡಿಮೆ ಇಲ್ಲ
ಪ್ರೀತಿ ಉಕ್ಕಿ ಬಂದು ಅಜ್ಜಿಯ ಮುದ್ದಾಟ
ಕಣ್ಮಣಿ ಇವಳಿಗೆ ದಣಿವೆ ಇಲ್ಲ